ಹಗರಿಬೊಮ್ಮನಹಳ್ಳಿ :ಅಧಿಕಾರಿಗಳ ದುರ್ವರ್ತನೆಯಿಂದ ಹಲವು ಇಲಾಖೆಗಳಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದಲ್ಲದೇ ಇಲಾಖಾ ಮರ್ಯಾದೆ ಹಾಡ ಹಗಲೇ ಹರಾಜಾದ ನಿದರ್ಶನಗಳು ಸಾಕಷ್ಟಿವೆ. ಅಧಿಕಾರಿಗಳ ಉಡಾಫೆ ಉತ್ತರದಿಂದ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿದ್ದಾರೆ.

ಇಂತಹ ವಿಲಕ್ಷಣ ಘಟನೆಯೊಂದು ಹಗರಿಬೊಮ್ಮನಹಳ್ಳಿ ತಾಲೂಕಿನಪಿಂಜಾರ್ ಹೆಗ್ಡಾಳ್ –ಆನಂದದೇವನಹಳ್ಳಿ ಮಾರ್ಗ ಮಧ್ಯೆ ನಡೆದಿದೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ವಾಹನವೊಂದು ಆಕ್ಸಲ್‌ ಕಟ್‌ ಆಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ನಿಂತಿದ್ದ ಕುರಿತು ವರದಿಗಾರರೊಬ್ಬರು ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ, “ನಿಮ್ಮ ಕಣ್ಣಿಗೆ ಏನು ಕಾಣುತ್ತಿದೆ ಅದೇ ಆಗಿದೆ” ಎಂಬ ರೀತಿಯಲ್ಲಿ ವ್ಯಂಗ್ಯವಾಗಿ ಉತ್ತರಿಸಿರುವುದು ಸಾರ್ವಜನಿಕ ಹಾಗೂ ಪತ್ರಕರ್ತರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ವಾಹನ ರಸ್ತೆ ಮಧ್ಯೆ ನಿಂತಿರುವುದರ ಕುರಿತು ವರದಿಗಾರರು ಸಾರ್ವಜನಿಕರ ಸಮಸ್ಯೆ ಮತ್ತು ಸಂಚಾರ ಸುರಕ್ಷತೆಯ ದೃಷ್ಟಿಯಿಂದ ಪ್ರಶ್ನೆ ಕೇಳಿದ್ದರು. ಆದರೆ ಸಮಸ್ಯೆಗೆ ಸೂಕ್ತ ಉತ್ತರ ನೀಡುವ ಬದಲು ಅಧಿಕಾರಿಯೊಬ್ಬರು ವ್ಯಂಗ್ಯಭರಿತವಾಗಿ ಉಡಾಫೆಯಿಂದ ಪ್ರತಿಕ್ರಿಯಿಸಿರುವುದು ಅಧಿಕಾರಿಗಳ ಜವಾಬ್ದಾರಿಯುತ ನಡೆ ಕುರಿತು ಪ್ರಶ್ನೆ ಮೂಡಿಸಿದೆ.

ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡುವುದು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ಕರ್ತವ್ಯ. ಪ್ರಶ್ನೆ ಕೇಳುವುದು ಪತ್ರಕರ್ತರ ಕೆಲಸ; ಅದಕ್ಕೆ ವಾಸ್ತವಾಂಶಗಳ ಆಧಾರದ ಮೇಲೆ ಉತ್ತರ ನೀಡುವುದು ಅಧಿಕಾರಿಗಳ ಜವಾಬ್ದಾರಿ.

ಸಾಮಾನ್ಯ ನಾಗರಿಕರು ರಸ್ತೆ ಮಧ್ಯೆ ವಾಹನ ನಿಲ್ಲಿಸಿದರೆ ನಿಯಮಗಳ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರಿಗಳೇ, ತಮ್ಮ ಇಲಾಖೆಯ ವಾಹನ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ನಿಂತಿರುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಅಲ್ಲದೆ ಬೇಲಿಯೇ ಎದ್ದು ಹೊಳಮೆಯ್ದಂತೆ ಅನ್ನೋ ಹಾಗಿದೆ.

ಸುಮಾರು ಬಾರು ಹಗರಿಬೊಮ್ಮನಹಳ್ಳಿ ಸಾರಿಗೆ ಇಲಾಖೆಯ ಬಸ್ಸುಗಳ ನಿರ್ವಹಣೆಯಿಲ್ಲದೆ ದಾರಿ ಮಧ್ಯೆ ಕೆಟ್ಟು ನಿಂತಿವೆ, ಆಕ್ಸಲ್ ತುಂಡಾಗಿ ರಸ್ತೆ ಬಡಿಯಿರುವ ಮರಗಳಿಗೆ ಡಿಕ್ಕಿ ಹೊಡೆದು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ, ಇಷ್ಟಾಗಿಯೂ ಸಮಸ್ಯೆಯನ್ನ ಬಗೆಹರಿಸದೆ ಬೇಕಾಬಿಟ್ಟಿ ಉತ್ತರ ನೀಡುವುದು ಎಷ್ಟರಮಟ್ಟಿಗೆ ಸರಿ

ಇಲಾಖೆ ಅಧಿಕಾರಿಗಳು ಸಾರ್ವಜನಿಕ ಸೇವೆಗಾಗಿಯೇ ಸರ್ಕಾರ ಇಂತವರಿಗೆ ಪ್ರತೀ ತಿಂಗಳು ಲಕ್ಷ ಲಕ್ಷ ಸಂಬಳ ನೀಡುತ್ತಿದೆ. ಸಾರ್ವಜನಿಕರಿಗೆ ಸ್ಪಂದಿಸದ ಇಂತಹ ಅಧಿಕಾರಿಗಳು ನಮಗೆ ಬೇಕೇ ಎನ್ನುವ ಪ್ರಶ್ನೆ ಮೂಡುತ್ತಿದೆ

ಒಬ್ಬ ಜವಾಬ್ದಾರಿಯುತ ವರದಿಗಾರ ನ ಪ್ರಶ್ನೆಗೆ ಉಡಾಫೆ ಉತ್ತರವನ್ನ ನೀಡಿದ ಅಧಿಕಾರಿ ಸಾರ್ವಜನಿಕರ ಕುಂಡುಂಕೊರತೆಗಳಿಗೆ ಇನ್ನೇನು ಸ್ಪಂದಿಸಿಯಾನು ಅನ್ನೋ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ

ತಾಲೂಕಿನ ಸುಮಾರು ಹಳ್ಳಿಗಳಿಗೆ ಬಸ್ಸುಗಳಿಲ್ಲ , ವಿದ್ಯಾರ್ಥಿಗಳು ನಿತ್ಯ ಬಸ್ಸಿಗಾಗಿ ಪರದಾಡುವಂತಾಗಿದೆ ಅಲ್ಲದೆ ವಿದ್ಯಾರ್ಥಿಗಳು ಹೆಚ್ಚುವರಿ ಬಸ್ಸುಗಳನ್ನು ನೀಡಿ ಎಂದು ಹಲವು ಬಾರಿ ಮನವಿ ನೀಡಿದರು ಕ್ಯಾರೇ ಎನ್ನದ ಇಂತಹ ಅಧಿಕಾರಿಗಳ ನಡೆಯಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಅಲ್ಲದೆ ಸ್ವತಃ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಳಮಟ್ಟದ ಅಧಿಕಾರಿಗಳು ರೋಸಿಹೋಗಿದ್ದಾರೆ

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮೇಲಧಿಕಾರಿಗಳು ಘಟನೆ ಕುರಿತು ವಾಸ್ತವಾಂಶ ಪರಿಶೀಲಿಸಿ, ಅಧಿಕಾರಿಯ ಹೇಳಿಕೆ ಮತ್ತು ನಡೆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಹಾಗೂ ಪತ್ರಕರ್ತರ ಒತ್ತಾಯವಾಗಿದೆ.

ಅಧಿಕಾರ ಎಂಬುದು ಸಾರ್ವಜನಿಕರನ್ನು ಪ್ರಶ್ನಿಸುವ ಹಕ್ಕಲ್ಲ; ಸಾರ್ವಜನಿಕರಿಗೆ ಉತ್ತರಿಸುವ ಜವಾಬ್ದಾರಿ. ಅಧಿಕಾರಿಗಳು ತಮ್ಮ ವರ್ತನೆ ಮತ್ತು ಕರ್ತವ್ಯದಲ್ಲಿ ಇದನ್ನು ಅರಿತುಕೊಂಡು ಮುಂದುವರಿಯಬೇಕಾಗಿದೆ.

Leave a Reply

Your email address will not be published. Required fields are marked *

Need Help?