ಕೊಪ್ಪಳ: ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಕಲಚೇತನ ನೌಕರನಾದ ಮಂಜುನಾಥ.ಹೆಚ್.ಜಿ.ಅವರು ಡೆತ್ ನೋಟ್ ಬರೆದಿಟ್ಟು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ವಿಷದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಂಜುನಾಥ.ಹೆಚ್.ಜಿ.ಅವರು ಈ ಹಿಂದೆ ಬಳ್ಳಾರಿಯ ಉಪನಿರ್ದೇಶಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ,ಕಳೆದ ಒಂದು ವರ್ಷದ ಹಿಂದೆ ಬಡ್ತಿ ಹೊಂದಿ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ಹಾಜರಾಗಿದ್ದರು.

ಯಾವುದೇ ನೌಕರ ಉತ್ತಮ ರೀತಿಯಲ್ಲಿ ಕೆಲಸ ಮಾಡದಿದ್ದಲ್ಲಿ ಅಂತಹ ನೌಕರನಿಗೆ ಶಿಕ್ಷೆ ನೀಡಲು ಹಲವಾರು ರೀತಿ ಮಾನದಂಡಗಳು ಸರಕಾರಿ ನೌಕರರ ಸೇವಾ ನಿಯಮದಲ್ಲಿ ಇದ್ದು ಕೂಡಾ,ಮೇಲಾಧಿಕಾರಗಳು ಯಾವ ಕಾರಣಕ್ಕಾಗಿ ಕಿರುಕುಳ ನೀಡಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಮಂಜುನಾಥ.ಹೆಚ್.ಜಿ.ಅವರ ಸಾವಿಗೆ ಕಾರಣರಾದವರ ವಿರುದ್ದ ಮುಖ್ಯಮಂತ್ರಿಗಳು,ಗೃಹ ಸಚಿವರು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಈ ಪ್ರಕರಣದ ಬಗ್ಗೆ ವಿಶೇಷ ಗಮನ ಹರಿಸಿ ತನಿಖೆ ಮಾಡುವುದರ ಮೂಲಕ ವಿಕಲಚೇತನ ನೌಕರನಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾ ಯ ಸಿಗುವ ರೀತಿಯಲ್ಲಿ ತನಿಖೆಯಾಗಬೇಕು.ಒಂದು ವೇಳೆ ನ್ಯಾಯ ಸಿಗದಿದ್ದರೆ ಸಂಘದ ವತಿಯಿಂದ ಧರಣಿಯನ್ನು ನಡೆಸಬೇಕಾಗುತ್ತದೆ ಅಲ್ಲದೇ ರಾಜ್ಯದಲ್ಲಿ ಒಂದು ವಿಕಲಚೇತನ ನೌಕರರಿಗೆ ಕಿರುಕುಳ ನೀಡುವ ಪ್ರಕರಣಗಳು ಪದೇ ಪದೇ ಜರುಗುತ್ತಿದ್ದು,ವಿಕಲಚೇತನ ನೌಕರಿಗೆ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ದ ಹೋರಾಟ ನಡೆಸಲಾತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Need Help?