ಕೊಪ್ಪಳ,: 19ನೇ ಬಾರಿಗೆ ನಗರದ ಸಾಹಿತ್ಯ ಭವನದಲ್ಲಿ ನಡೆದ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಸಿದ್ದಯ್ಯ ಪುರಾಣಿಕರ ವಚನ ನೃತ್ಯ ವೈಭವವನ್ನು ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಪೂಜ್ಯ ಶ್ರೀ ಮಹಾದೇವ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿ, ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ಕೊಪ್ಪಳ ಉತ್ಸವ, ಇಟಗಿ ಉತ್ಸವ, ಅಂಜನಾದ್ರಿ ಉತ್ಸವ ಮಾಡುವ ಮೂಲಕ ಜಿಲ್ಲೆಯ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದು, ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಸ್ಪಂದಿಸಿ ಸಹಕಾರ ನೀಡಬೇಕು ಎಂದ ಅವರು, ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಮೂಲಕ ಉತ್ಸವದಲ್ಲಿ ಅವಕಾಶ ನೀಡಿದ್ದಾರೆ. ಅನೇಕ ಜಿಲ್ಲೆಯ ಕಲಾವಿದರಿಗೆ ಮಾಸಶನ ದೊರೆಯಲು ಈ ವೇದಿಕೆಗಳು ಸಹಕಾರಿಯಾಗಿವೆ ಎಂದರು. ಹಿರಿಯ ಚಲನಚಿತ್ರ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಡಾ. ಸಿದ್ದಯ್ಯ ಪುರಾಣಿಕರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿದರು, ಜಿಲ್ಲೆಯ ನಿರ್ಮಾತ ಜೆ.ಹೆಚ್. ಪಾಟೇಲರ ಭಾವಚಿತ್ರಕ್ಕೆ ವಕೀಲರಾದ ಮಲ್ಲನಗೌಡ ಪಾಟೀಲ ಪುಷ್ಪ ಅರ್ಪಣೆ ಮಾಡಿದರು.
ಬಳಿಕ ಜಿ.ಎಂ.ಶಿವಪುರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳವ ಸರ್ವ ನುಡಿ ದಿನಪತ್ರಿಕೆಯ ವಿಶೇಷ ಸಂಚಿಕೆಯನ್ನು ನಿವೃತ್ತ ಉಪನ್ಯಾಸಕರಾದ ಎಂ.ಎನ್. ಜನಾದ್ರಿ ಅವರು ಬಿಡುಗಡೆಗೊಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾ ತಂಡಗಳನ್ನು ಪ್ರಾಯೋಜಿಸಿತು.
ಕುಷ್ಟಗಿಯ ಮೇಘನಾ ಕುಲಕರ್ಣಿ ಮತ್ತು ಶಿವಲೀಲಾ ಹಿರೇಮಠ ನಾಡಗೀತೆ ಹಾಗೂ ರೈತ ಗೀತೆಯನ್ನು ಪ್ರಸುತ್ತಪಡಿಸಿದರು.
ಹೊಸಪೇಟೆಯ ಗಗನ ಮತ್ತು ತಂಡ, ಕಂಪ್ಲಿಯ ಸುನೀಲಕುಮಾರ ತಂಡ, ಕೊಪ್ಪಳದ ಶಿಲ್ಪ ಮಂಗಳೂರು ತಂಡದಿಂದ
ಸಿದ್ದಯ್ಯ ಪುರಾಣಿಕರ ವಚನ ನೃತ್ಯ ವೈಭವದ ಸಮೂಹ ನೃತ್ಯ. ರುಕ್ಮಿಣಿ ಸುರ್ವೆ ತಂಡದಿಂದ ಸಮೂಹ ನೃತ್ಯ, ಕೊಪ್ಪಳದ ನಿನಾಸಂ ಕರಿಯಪ್ಪ ನಿರ್ದೇಶನದ ಶ್ರೀಶೈಲನಗರದ ಸರಕಾರಿ ಶಾಲೆ ಮಕ್ಕಳಿಂದ ಜಾನಪದದ ಕಂಸಾಳೆ ಮತ್ತು ಕಲೇರಿ ನೃತ್ಯ,
ಕೊಪಣಾ ಟ್ರಸ್ಟ್ ತಂಡದಿಂದ ಸಮೂಹ ನೃತ್ಯ, ಅಮೃತ ತಂಡ ಹೊಸಪೇಟೆ, ಸುರೇಶ್ ತಂಡದಿಂದ ಸಮೂಹ ನೃತ್ಯ, ಜ್ಯೋತಿ ಗಲಗಲಿ ಹುಬ್ಬಳ್ಳಿ, ಮಂಡಲಗೇರಿ ಮತ್ತು ಗೊರ್ಲಕೊಪ್ಪದಿಂದ ಸೋಬಾನೆ ಪದಗಳು,
ಅಲ್ಲದೇ ಸ್ಥಳೀಯ ಹತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ನೆರದಿದ್ದ ಜನರ ಮನರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಗೌರವಧ್ಯಕ್ಷ ಎಂಬಿ ಅಳವಂಡಿ ವಹಿಸಿದ್ದರು, ವೇದಿಕೆ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಸಾoಸ್ಕೃತಿಕ ಕಾರ್ಯದರ್ಶಿ ಜಿ.ಎಂ. ಶಿವಪುರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹಿರೇಮಠ, ಶಿಕ್ಷಕರಾದ ಬಾಲನಾಗಮ್ಮ, ಉಮಾ ಪಾಟೀಲ, ಬಸವರಾಜ ಕೊಡ್ಲಿ
ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ಸ್ವಾಗತಿಸಿ, ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಜಿಲ್ಲಾ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಆಗ್ರಹಿಸಿದರು. ಕಂಪ್ಲಿಯ ಶಿಕ್ಷಕ ಸುನಿಲ್
ಮಾಲಿಪಾಟೀಲ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಬಾಲನಾಗಮ್ಮ ವoದಿಸಿದರು.
