ನಾವು ಪ್ರತಿದಿನ ಸಾವಿರಾರು ಜನರನ್ನು ನೋಡುತ್ತೇವೆ. ಆದರೆ ಕೆಲವು ಮುಖಗಳನ್ನು ನೋಡಿದ ತಕ್ಷಣ ಕಣ್ಣು ತಗ್ಗಿಸುತ್ತೇವೆ. ಮಾತು ನಿಲ್ಲಿಸುತ್ತೇವೆ. ಆ ಮುಖಗಳ ಹಿಂದಿರುವ ನೋವನ್ನು ಕೇಳಲು ನಾವು ಸಿದ್ಧವಿರುವುದಿಲ್ಲ. ಅವರೇ ಸಮಾಜದಲ್ಲಿ “ಲೈಂಗಿಕ ಕೆಲಸಗಾರರು” ಎಂದು ಕರೆಯಲ್ಪಡುವ ಹೆಣ್ಣುಮಕ್ಕಳು. ಯಾರೂ ಹುಟ್ಟಿನಿಂದಲೇ ಈ ವೃತ್ತಿಯನ್ನು ಆಯ್ಕೆ ಮಾಡುವುದಿಲ್ಲ. ತೀವ್ರ ಬಡತನ, ಕುಟುಂಬದ ಜವಾಬ್ದಾರಿ, ಶಿಕ್ಷಣದ ಕೊರತೆ, ಮನೆಯಲ್ಲಿ ನಡೆಯುವ ದೌರ್ಜನ್ಯ, ವಿಧವೆಯಾಗುವುದು – ಈ ರೀತಿಯ ಕಾರಣಗಳು ಅವರನ್ನು ಈ ದಾರಿಗೆ ತಳ್ಳುತ್ತವೆ. “ಹೊಟ್ಟೆಪಾಡಿಗಾಗಿ ಇದೊಂದೇ ದಾರಿ ಇತ್ತು” ಎಂದು ಒಬ್ಬಳು ಹೇಳಿದಾಗ, ಅಲ್ಲಿ ನಮ್ಮ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತದೆ. ಇದು ಆಕೆಯ ವೈಯಕ್ತಿಕ ತಪ್ಪಲ್ಲ, ಇದು ಸಾಮಾಜಿಕ ಸಮಸ್ಯೆ. ಅವಳ ಹೆಸರು ಏನು ಗೊತ್ತಾ..? “ಲೈಂಗಿಕ ಕೆಲಸಗಾರ್ತಿ” ಅವಳ ಬಾಲ್ಯ ಹೇಗಿದೆಯೆಂದರೆ… ಅವಳೂ ಒಮ್ಮೆ ನಮ್ಮ ತರಾನೇ ಶಾಲೆಗೆ ಹೋಗಿ “Teacher Good Morning” ಅಂತ ಹೇಳಿದ್ದಳು. ಅವಳೂ ಕೂಡ ಒಮ್ಮೆ ತಾಯಿ ಸೀರೆ ಉಟ್ಟು “ನಾನು ದೊಡ್ಡವಳಾದಾಗ Doctor ಆಗ್ತೀನಿ” ಅಂತ ಕನಸು ಕಂಡಿದ್ದಳು. ಆದ್ರೆ ಆ ಕನಸಿಗೆ ಬಡತನ ಅಡ್ಡ ಬಂತು. ಅಪ್ಪ ಕುಡಿದು ಬಂದು ಹೊಡೆದಾಗ, ಅಣ್ಣನೇ ಅವಳ ಮೇಲೆ ಕಣ್ಣು ಹಾಕಿ ನೋಡಿದಾಗ, ಮನೆಗೆ ಊಟಕ್ಕೆ ಅಕ್ಕಿ ಇಲ್ಲದಾಗ…ಅವಳ ಕನಸುಗಳು ಒಂದೊಂದಾಗಿ ಸತ್ತು ಹೋದವು.ಯಾರೂ ಕೂಡ “ಸ್ವಇಚ್ಛೆಯಿಂದ” ಈ ನರಕಕ್ಕೆ ಕಾಲಿಡೋದಿಲ್ಲ ಅದು ಅನಿವಾರ್ಯತೆಯಿಂದ ತೆರೆದ ಕೊನೆಯ ಬಾಗಿಲು. ನಾವು ಮಕ್ಕಳಿಗೆ ಕಥೆ ಹೇಳಿ ಮಲಗಿಸುವಾಗ, ಅವಳು ಮನೆ ಬಾಡಿಗೆಗಾಗಿ ಅಳ್ತಾ ಇರುತ್ತಾಳೆ. ನಾವು ಫ್ಯಾನ್ ಹಾಕಿ ನೆಮ್ಮದಿಯಾಗಿ ಮಲಗುವಾಗ, ಅವಳು “ಇವತ್ತು ಏನಾಗುತ್ತೋ” ಅನ್ನೋ ಭಯದಲ್ಲಿ ನಡುಗುತ್ತಾ ಇರುತ್ತಾಳೆ. ಗ್ರಾಹಕನ ಅವಮಾನ, ಪೋಲಿಸ್ರ ಲಾಠಿ, ಸಮಾಜದ ಉಗುಳು. ಇದೆಲ್ಲಾ ಸಹಿಸಿಕೊಂಡು ಸಂಪಾದಿಸಿದ 500 ರೂಪಾಯಿಯಲ್ಲಿ ಮಗನಿಗೆ ಹಾಲು, ಅಮ್ಮನಿಗೆ ಮಾತ್ರೆ ತರಬೇಕು.ಅವಳು ದೇಹ ಮಾರ್ತಾಳಾ..? ಇಲ್ಲ. ಅವಳು ತನ್ನ ಆತ್ಮಗೌರವನ್ನ ಅಡವಿಟ್ಟು ಕುಟುಂಬನ ಕಾಪಾಡ್ತಾಳೆ.ಒಂದು ತಪ್ಪು ಮಾಡಿದ್ರೆ ಒಂದು ಸಲ ಶಿಕ್ಷೆ ಸಾಕಲ್ವಾ..? ಆದ್ರೆ ನಾವು ಅವಳಿಗೆ ಎರಡು ಸಲ ಶಿಕ್ಷೆ ಕೊಡ್ತೀವಿ. ಮೊದಲನೆಯದು… ಪರಿಸ್ಥಿತಿಯ ಶಿಕ್ಷೆ. ಎರಡನೆಯದು… ನಮ್ಮ ತಿರಸ್ಕಾರದ ಶಿಕ್ಷೆ. ಅವಳ ಮಗ ಶಾಲೆಗೆ ಹೋದ್ರೆ “ಅವನ ತಾಯಿ ಹಾಗೆ” ಅಂತ ಟೀಚರ್ ಮೂದಲಿಸ್ತಾರೆ. ಅವಳು ಆಸ್ಪತ್ರೆಗೆ ಹೋದ್ರೆ ಕೊನೆಯಲ್ಲಿ ನೋಡ್ತಾರೆ. ಅವಳು ಬಾಡಿಗೆ ಮನೆ ಹುಡುಕಿದ್ರೆ “ನಿಮಗೆ ಕೊಡಲ್ಲ” ಅಂತ 10 ಬಾಗಿಲು ಮುಚ್ಚುತ್ತವೆ. ನಾವು ಅವಳನ್ನ ಮನುಷ್ಯಳಾಗೇ ನೋಡೋದಿಲ್ಲ. ಒಂದು “ಲೇಬಲ್” ಆಗಿ ನೋಡ್ತೀವಿ. ಆದರೂ ಅವಳು ಸೋತಿಲ್ಲಾ ಇಷ್ಟೆಲ್ಲಾ ಆದ್ಮೇಲೂ ಅವಳು ಮುಗುಳ್ನಗೆ ಬಿಟ್ಟು ಮಗನಿಗೆ “ಓದು ಮಗು, ದೊಡ್ಡವನಾಗು” ಅಂತ ಹೇಳ್ತಾಳೆ.ಅವಮಾನದ ಕಣ್ಣೀರನ್ನ ಒರೆಸಿಕೊಂಡು ಮತ್ತೆ ಕೆಲಸಕ್ಕೆ ಹೋಗ್ತಾಳೆ. ಇದು ದೌರ್ಬಲ್ಯ ಅಲ್ಲ. ಇದು ಜಗತ್ತಿನಲ್ಲೇ ದೊಡ್ಡ ಛಲ..! ಅವಳೂ ಒಬ್ಬಳ ಮಗಳೇ. ಯಾರದೋ ತಂಗಿ. ಯಾರದೋ ಅಕ್ಕ. ಹಸಿವಿನಿಂದ ಅಳ್ತಿದ್ದ ಮಗುವಿಗೆ ಹಾಲು ಕೊಡೋಕೆ ದಾರಿ ಕಾಣದೆ ಈ ದಾರಿ ಹಿಡಿದಿರಬಹುದು. ಗಂಡ ಬಿಟ್ಟು ಹೋದ ಮೇಲೆ ಸಾಲಗಾರರು ಮನೆ ಬಾಗಿಲಲ್ಲಿ ನಿಂತಾಗ ಬೇರೆ ದಾರಿ ಇಲ್ಲದೆ ಬಂದಿರಬಹುದು. ಶಾಲೆಗೆ ಹೋಗೋಕೆ ದುಡ್ಡು ಇಲ್ಲದೆ, ಮಾನಕ್ಕೆ ಬೆಲೆ ಕಟ್ಟಬೇಕಾದ ಪರಿಸ್ಥಿತಿ ಬಂದಿರಬಹುದು. ಅವಳು ಈ ಕೆಲಸವನ್ನ “ಕನಸು” ಕಂಡು ಆಯ್ಕೆ ಮಾಡಿಲ್ಲ, ಅದು “ಅನಿವಾರ್ಯತೆ”. ಅವಳ ದಿನ ಹೇಗಿರುತ್ತೆ ಗೊತ್ತಾ..? ಹಗಲು ಹೊತ್ತು ತಲೆ ತಗ್ಗಿಸಿ ಬದುಕೋದು. ರಾತ್ರಿ ಹೊತ್ತು ಹೊಟ್ಟೆಗಾಗಿ ದುಡಿಯೋದು. ಪೋಲಿಸ್ರಿಂದ ಭಯ, ಸಮಾಜದಿಂದ ನಿಂದನೆ, ಮನೆಯಲ್ಲಿ “ನೀನು ಯಾರು” ಅನ್ನೋ ಪ್ರಶ್ನೆ. ಇದೆಲ್ಲದರ ನಡುವೆ ಮನೆಯ ಜವಾಬ್ದಾರಿ, ಪರಿಹಾರದ ದಾರಿಯನ್ನು ಹುಡುಕೋಣ. ತೀರ್ಪು ಕೊಡುವುದನ್ನು ನಿಲ್ಲಿಸಿ, ಪರಿಹಾರದ ಕಡೆಗೆ ಹೆಜ್ಜೆ ಇಡೋಣ. 1. “ಭಾಷೆ ಬದಲಾಯಿಸೋಣ” “ವೇಶ್ಯೆ” ಎಂಬ ನಿಂದನಾತ್ಮಕ ಪದ ಬದಲು “ಲೈಂಗಿಕ ಕೆಲಸಗಾರ” ಎಂಬ ಗೌರವಯುತ ಪದವನ್ನು ಬಳಸೋಣ. ಭಾಷೆ ಬದಲಾದರೆ ನೋಟ ಬದಲಾಗುತ್ತದೆ. 2.” ಅವಕಾಶ ನೀಡೋಣ” ಸರ್ಕಾರ ಮತ್ತು NGOಗಳು ಸೇರಿ ಕೌಶಲ ತರಬೇತಿ, ಸ್ವಸಹಾಯ ಗುಂಪು, ಸಣ್ಣ ಉದ್ಯೋಗಗಳಿಗೆ ಸಾಲ ನೀಡಬೇಕು. ಬಯಸುವವರಿಗೆ ಪರ್ಯಾಯ ಜೀವನದ ದಾರಿ ತೋರಿಸಬೇಕು. 3. “ಹಕ್ಕು ಮತ್ತು ಸುರಕ್ಷತೆ” ಯಾವ ವೃತ್ತಿಯಲ್ಲಿದ್ದರೂ ಘನತೆಯಿಂದ ಬದುಕುವ ಹಕ್ಕು, ಆರೋಗ್ಯ, ಕಾನೂನು ರಕ್ಷಣೆ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದನ್ನು ಖಚಿತಪಡಿಸಬೇಕು. ಕೊನೆಯದಾಗಿ… ನಾಳೆ ನಮ್ಮ ಮನೆಯ ಹೆಣ್ಣುಮಗಳಿಗೆ ಊಟಕ್ಕೆ ದಾರಿ ಇಲ್ಲದ ಪರಿಸ್ಥಿತಿ ಬಂದರೆ ನಾವು ಏನು ಮಾಡುತ್ತಿದ್ದೆವು..? ಈ ಒಂದೇ ಪ್ರಶ್ನೆಗೆ ಉತ್ತರ ಹುಡುಕಿದರೆ ನಮ್ಮಲ್ಲಿರುವ ಕಠೋರತೆ ಕರಗಿ ಕರುಣೆ ಮೂಡುತ್ತದೆ.ಅವರು ಸಮಸ್ಯೆ ಅಲ್ಲ. ಅವರ ಪರಿಸ್ಥಿತಿ ಸಮಸ್ಯೆ. ಪರಿಸ್ಥಿತಿಯನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಬೆರಳು ತೋರಿಸುವುದನ್ನು ನಿಲ್ಲಿಸೋಣ. ಕೈ ಚಾಚೋಣ. ಯಾಕೆಂದರೆ ಕೊನೆಗೆ ನಾವೆಲ್ಲ ಒಂದೇ ಸಮಾಜದವರು. ಮನುಷ್ಯರಂತೇ ಮನುಷ್ಯರನ್ನು ಕಾಣೋಣ. ಅವಳ ಹೆಸರೇ ಲೈಂಗಿಕ ಕೆಲಸಗಾರ್ತಿ..!? ನಾವು ಪ್ರತಿದಿನ ಸಾವಿರಾರು ಜನರನ್ನು ನೋಡುತ್ತೇವೆ. ಆದರೆ ಕೆಲವು ಮುಖಗಳನ್ನು ನೋಡಿದ ತಕ್ಷಣ ಕಣ್ಣು ತಗ್ಗಿಸುತ್ತೇವೆ. ಮಾತು ನಿಲ್ಲಿಸುತ್ತೇವೆ. ಆ ಮುಖಗಳ ಹಿಂದಿರುವ ನೋವನ್ನು ಕೇಳಲು ನಾವು ಸಿದ್ಧವಿರುವುದಿಲ್ಲ. ಅವರೇ ಸಮಾಜದಲ್ಲಿ “ಲೈಂಗಿಕ ಕೆಲಸಗಾರರು” ಎಂದು ಕರೆಯಲ್ಪಡುವ ಹೆಣ್ಣುಮಕ್ಕಳು. ಯಾರೂ ಹುಟ್ಟಿನಿಂದಲೇ ಈ ವೃತ್ತಿಯನ್ನು ಆಯ್ಕೆ ಮಾಡುವುದಿಲ್ಲ. ತೀವ್ರ ಬಡತನ, ಕುಟುಂಬದ ಜವಾಬ್ದಾರಿ, ಶಿಕ್ಷಣದ ಕೊರತೆ, ಮನೆಯಲ್ಲಿ ನಡೆಯುವ ದೌರ್ಜನ್ಯ, ವಿಧವೆಯಾಗುವುದು – ಈ ರೀತಿಯ ಕಾರಣಗಳು ಅವರನ್ನು ಈ ದಾರಿಗೆ ತಳ್ಳುತ್ತವೆ. “ಹೊಟ್ಟೆಪಾಡಿಗಾಗಿ ಇದೊಂದೇ ದಾರಿ ಇತ್ತು” ಎಂದು ಒಬ್ಬಳು ಹೇಳಿದಾಗ, ಅಲ್ಲಿ ನಮ್ಮ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತದೆ. ಇದು ಆಕೆಯ ವೈಯಕ್ತಿಕ ತಪ್ಪಲ್ಲ, ಇದು ಸಾಮಾಜಿಕ ಸಮಸ್ಯೆ. ಅವಳ ಹೆಸರು ಏನು ಗೊತ್ತಾ..? “ಲೈಂಗಿಕ ಕೆಲಸಗಾರ್ತಿ” ಅವಳ ಬಾಲ್ಯ ಹೇಗಿದೆಯೆಂದರೆ… ಅವಳೂ ಒಮ್ಮೆ ನಮ್ಮ ತರಾನೇ ಶಾಲೆಗೆ ಹೋಗಿ “Teacher Good Morning” ಅಂತ ಹೇಳಿದ್ದಳು. ಅವಳೂ ಕೂಡ ಒಮ್ಮೆ ತಾಯಿ ಸೀರೆ ಉಟ್ಟು “ನಾನು ದೊಡ್ಡವಳಾದಾಗ Doctor ಆಗ್ತೀನಿ” ಅಂತ ಕನಸು ಕಂಡಿದ್ದಳು. ಆದ್ರೆ ಆ ಕನಸಿಗೆ ಬಡತನ ಅಡ್ಡ ಬಂತು. ಅಪ್ಪ ಕುಡಿದು ಬಂದು ಹೊಡೆದಾಗ, ಅಣ್ಣನೇ ಅವಳ ಮೇಲೆ ಕಣ್ಣು ಹಾಕಿ ನೋಡಿದಾಗ, ಮನೆಗೆ ಊಟಕ್ಕೆ ಅಕ್ಕಿ ಇಲ್ಲದಾಗ…ಅವಳ ಕನಸುಗಳು ಒಂದೊಂದಾಗಿ ಸತ್ತು ಹೋದವು.ಯಾರೂ ಕೂಡ “ಸ್ವಇಚ್ಛೆಯಿಂದ” ಈ ನರಕಕ್ಕೆ ಕಾಲಿಡೋದಿಲ್ಲ ಅದು ಅನಿವಾರ್ಯತೆಯಿಂದ ತೆರೆದ ಕೊನೆಯ ಬಾಗಿಲು. ನಾವು ಮಕ್ಕಳಿಗೆ ಕಥೆ ಹೇಳಿ ಮಲಗಿಸುವಾಗ, ಅವಳು ಮನೆ ಬಾಡಿಗೆಗಾಗಿ ಅಳ್ತಾ ಇರುತ್ತಾಳೆ. ನಾವು ಫ್ಯಾನ್ ಹಾಕಿ ನೆಮ್ಮದಿಯಾಗಿ ಮಲಗುವಾಗ, ಅವಳು “ಇವತ್ತು ಏನಾಗುತ್ತೋ” ಅನ್ನೋ ಭಯದಲ್ಲಿ ನಡುಗುತ್ತಾ ಇರುತ್ತಾಳೆ. ಗ್ರಾಹಕನ ಅವಮಾನ, ಪೋಲಿಸ್ರ ಲಾಠಿ, ಸಮಾಜದ ಉಗುಳು. ಇದೆಲ್ಲಾ ಸಹಿಸಿಕೊಂಡು ಸಂಪಾದಿಸಿದ 500 ರೂಪಾಯಿಯಲ್ಲಿ ಮಗನಿಗೆ ಹಾಲು, ಅಮ್ಮನಿಗೆ ಮಾತ್ರೆ ತರಬೇಕು.ಅವಳು ದೇಹ ಮಾರ್ತಾಳಾ..? ಇಲ್ಲ. ಅವಳು ತನ್ನ ಆತ್ಮಗೌರವನ್ನ ಅಡವಿಟ್ಟು ಕುಟುಂಬನ ಕಾಪಾಡ್ತಾಳೆ.ಒಂದು ತಪ್ಪು ಮಾಡಿದ್ರೆ ಒಂದು ಸಲ ಶಿಕ್ಷೆ ಸಾಕಲ್ವಾ..? ಆದ್ರೆ ನಾವು ಅವಳಿಗೆ ಎರಡು ಸಲ ಶಿಕ್ಷೆ ಕೊಡ್ತೀವಿ. ಮೊದಲನೆಯದು… ಪರಿಸ್ಥಿತಿಯ ಶಿಕ್ಷೆ. ಎರಡನೆಯದು… ನಮ್ಮ ತಿರಸ್ಕಾರದ ಶಿಕ್ಷೆ. ಅವಳ ಮಗ ಶಾಲೆಗೆ ಹೋದ್ರೆ “ಅವನ ತಾಯಿ ಹಾಗೆ” ಅಂತ ಟೀಚರ್ ಮೂದಲಿಸ್ತಾರೆ. ಅವಳು ಆಸ್ಪತ್ರೆಗೆ ಹೋದ್ರೆ ಕೊನೆಯಲ್ಲಿ ನೋಡ್ತಾರೆ. ಅವಳು ಬಾಡಿಗೆ ಮನೆ ಹುಡುಕಿದ್ರೆ “ನಿಮಗೆ ಕೊಡಲ್ಲ” ಅಂತ 10 ಬಾಗಿಲು ಮುಚ್ಚುತ್ತವೆ. ನಾವು ಅವಳನ್ನ ಮನುಷ್ಯಳಾಗೇ ನೋಡೋದಿಲ್ಲ. ಒಂದು “ಲೇಬಲ್” ಆಗಿ ನೋಡ್ತೀವಿ. ಆದರೂ ಅವಳು ಸೋತಿಲ್ಲಾ ಇಷ್ಟೆಲ್ಲಾ ಆದ್ಮೇಲೂ ಅವಳು ಮುಗುಳ್ನಗೆ ಬಿಟ್ಟು ಮಗನಿಗೆ “ಓದು ಮಗು, ದೊಡ್ಡವನಾಗು” ಅಂತ ಹೇಳ್ತಾಳೆ.ಅವಮಾನದ ಕಣ್ಣೀರನ್ನ ಒರೆಸಿಕೊಂಡು ಮತ್ತೆ ಕೆಲಸಕ್ಕೆ ಹೋಗ್ತಾಳೆ. ಇದು ದೌರ್ಬಲ್ಯ ಅಲ್ಲ. ಇದು ಜಗತ್ತಿನಲ್ಲೇ ದೊಡ್ಡ ಛಲ..! ಅವಳೂ ಒಬ್ಬಳ ಮಗಳೇ. ಯಾರದೋ ತಂಗಿ. ಯಾರದೋ ಅಕ್ಕ. ಹಸಿವಿನಿಂದ ಅಳ್ತಿದ್ದ ಮಗುವಿಗೆ ಹಾಲು ಕೊಡೋಕೆ ದಾರಿ ಕಾಣದೆ ಈ ದಾರಿ ಹಿಡಿದಿರಬಹುದು. ಗಂಡ ಬಿಟ್ಟು ಹೋದ ಮೇಲೆ ಸಾಲಗಾರರು ಮನೆ ಬಾಗಿಲಲ್ಲಿ ನಿಂತಾಗ ಬೇರೆ ದಾರಿ ಇಲ್ಲದೆ ಬಂದಿರಬಹುದು. ಶಾಲೆಗೆ ಹೋಗೋಕೆ ದುಡ್ಡು ಇಲ್ಲದೆ, ಮಾನಕ್ಕೆ ಬೆಲೆ ಕಟ್ಟಬೇಕಾದ ಪರಿಸ್ಥಿತಿ ಬಂದಿರಬಹುದು. ಅವಳು ಈ ಕೆಲಸವನ್ನ “ಕನಸು” ಕಂಡು ಆಯ್ಕೆ ಮಾಡಿಲ್ಲ, ಅದು “ಅನಿವಾರ್ಯತೆ”. ಅವಳ ದಿನ ಹೇಗಿರುತ್ತೆ ಗೊತ್ತಾ..? ಹಗಲು ಹೊತ್ತು ತಲೆ ತಗ್ಗಿಸಿ ಬದುಕೋದು. ರಾತ್ರಿ ಹೊತ್ತು ಹೊಟ್ಟೆಗಾಗಿ ದುಡಿಯೋದು. ಪೋಲಿಸ್ರಿಂದ ಭಯ, ಸಮಾಜದಿಂದ ನಿಂದನೆ, ಮನೆಯಲ್ಲಿ “ನೀನು ಯಾರು” ಅನ್ನೋ ಪ್ರಶ್ನೆ. ಇದೆಲ್ಲದರ ನಡುವೆ ಮನೆಯ ಜವಾಬ್ದಾರಿ, ಪರಿಹಾರದ ದಾರಿಯನ್ನು ಹುಡುಕೋಣ. ತೀರ್ಪು ಕೊಡುವುದನ್ನು ನಿಲ್ಲಿಸಿ, ಪರಿಹಾರದ ಕಡೆಗೆ ಹೆಜ್ಜೆ ಇಡೋಣ. 1. “ಭಾಷೆ ಬದಲಾಯಿಸೋಣ” “ವೇಶ್ಯೆ” ಎಂಬ ನಿಂದನಾತ್ಮಕ ಪದ ಬದಲು “ಲೈಂಗಿಕ ಕೆಲಸಗಾರ” ಎಂಬ ಗೌರವಯುತ ಪದವನ್ನು ಬಳಸೋಣ. ಭಾಷೆ ಬದಲಾದರೆ ನೋಟ ಬದಲಾಗುತ್ತದೆ. 2.” ಅವಕಾಶ ನೀಡೋಣ” ಸರ್ಕಾರ ಮತ್ತು NGOಗಳು ಸೇರಿ ಕೌಶಲ ತರಬೇತಿ, ಸ್ವಸಹಾಯ ಗುಂಪು, ಸಣ್ಣ ಉದ್ಯೋಗಗಳಿಗೆ ಸಾಲ ನೀಡಬೇಕು. ಬಯಸುವವರಿಗೆ ಪರ್ಯಾಯ ಜೀವನದ ದಾರಿ ತೋರಿಸಬೇಕು. 3. “ಹಕ್ಕು ಮತ್ತು ಸುರಕ್ಷತೆ” ಯಾವ ವೃತ್ತಿಯಲ್ಲಿದ್ದರೂ ಘನತೆಯಿಂದ ಬದುಕುವ ಹಕ್ಕು, ಆರೋಗ್ಯ, ಕಾನೂನು ರಕ್ಷಣೆ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದನ್ನು ಖಚಿತಪಡಿಸಬೇಕು. ಕೊನೆಯದಾಗಿ… ನಾಳೆ ನಮ್ಮ ಮನೆಯ ಹೆಣ್ಣುಮಗಳಿಗೆ ಊಟಕ್ಕೆ ದಾರಿ ಇಲ್ಲದ ಪರಿಸ್ಥಿತಿ ಬಂದರೆ ನಾವು ಏನು ಮಾಡುತ್ತಿದ್ದೆವು..? ಈ ಒಂದೇ ಪ್ರಶ್ನೆಗೆ ಉತ್ತರ ಹುಡುಕಿದರೆ ನಮ್ಮಲ್ಲಿರುವ ಕಠೋರತೆ ಕರಗಿ ಕರುಣೆ ಮೂಡುತ್ತದೆ.ಅವರು ಸಮಸ್ಯೆ ಅಲ್ಲ. ಅವರ ಪರಿಸ್ಥಿತಿ ಸಮಸ್ಯೆ. ಪರಿಸ್ಥಿತಿಯನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಬೆರಳು ತೋರಿಸುವುದನ್ನು ನಿಲ್ಲಿಸೋಣ. ಕೈ ಚಾಚೋಣ. ಯಾಕೆಂದರೆ ಕೊನೆಗೆ ನಾವೆಲ್ಲ ಒಂದೇ ಸಮಾಜದವರು. ಮನುಷ್ಯರಂತೇ ಮನುಷ್ಯರನ್ನು ಕಾಣೋಣ.
ಲೇಖಕಿ:

