ಯಾವ ಶುಭ ಗಳಿಗೆಯಲಿ ಯಾವ ಕೋಗಿಲೆ ಹಾಡೊ!
ಕೇಳು ಅದ ಮನವಿಟ್ಟು ಹರಿ ಕರುಣೆಯೆoದು
ಹೊಸತೊಂದು ಹೊಳದೀತು, ನವಗೀತೆ ಮೂಡೀತು!
ಸಕಲ ದೇವಪ್ರಸಾದ
ಮುದ್ದುರಾಮ.
ಗುರುವಿಗಿಂತ ಬಂಧುಗಳು ನಮಗೆ ಯಾರು ಇರುವುದಿಲ್ಲ. ಅನುಗಾಲ
ನಿಸ್ವಾರ್ಥತೆಯಿಂದ ಹರಸಿ ನಮ್ಮ ಏಳಿಗೆಗಾಗಿ ಹರಸುವವನೆ ಗುರು. ನಮ್ಮೊಳಗೆ ಇರುವ ಅಂತ ಶೂನ್ಯತ್ವ ಅಡಗಿಸಿ ಅಂತರ್ಮುಖತೆ ಅರಳುವಂತೆ ಮಾಡುವವನು ಗುರು. ನಮ್ಮ ಪದಗಳಿಗೆ ಮಸಿಯಾಗಿ ಅರಿವಿನಂಗಳಕೆ ಇಳಿಸಿ ಅರ್ಥಾನುರೂಪವಾಗಿ ಬೆಳಗುವ ಪದಪುಂಜಗಳಿಗೆ ಗುರುವಿನ ಆಶೀರ್ವಾದ ಬೇಕು. ಅಜ್ಞಾನವನ್ನು ಬೇರಿಂದ
ಕಿತ್ತೆಸೆದು ಅರಿವಿಗ ಅಭಿಮುಖವಾಗಿ ನಡೆಯುವುದ ಕಲಿಸಿ ಮನ್ನಣೆಗಳು ಸಂದುವಾಗ ದೂರದಿಂದ ನಗುತ ಆಶೀರ್ವದಿಸುವವನೇ ಗುರು. ತನಗಿಂತ ಉನ್ನತ ಸ್ಥಾನಕ್ಕೇರಲಿ ಎಂದು ಹರಸುವ ಏಕ ಮಾತ್ರ ಜೀವ ಎಂದರೆ ಅವನು ಗುರು. ನಮ್ಮ ಲಿಪಿಗಳು ಅವನ ಆಶೀರ್ವಾದ. ನಮ್ಮ ಕನಸು ನನಸಾಗಲು ಅವನ ಕರುಣೆ ಬೇಕು. ಅಕ್ಷಯ ಭೋದವನ್ನು ದಯಪಾಲಿಸಿ ಅಖಲ್ಯರನ್ನ ಜ್ಞಾನಿಯನ್ನಾಗಿಸಿ ಬಾಳಿಗೆ ಬೆಳಕ ನೀಡುವ ಗುರು ಸಿಗುವುದು ನಮ್ಮ ಸುಕೃತ ಪುಣ್ಯ ವೆನ್ನಬಹುದು. ನಮ್ಮ ಅರಿವ ವಿಸ್ತರಿಸಿದ ಗುರುಗಳಿಗೆ ನಮ್ಮ ಅಗ್ರ ಪೂಜೆ ಸಲ್ಲಬೇಕು. ಮುಗ್ದತೆಯನ್ನ ಪ್ರಬುದ್ಧವಾಗಿಸಿ ಜ್ಞಾನದ ಅಚ್ಚ ಬೆಳದಿಂಗಳ ಅಭಯದಾನವನ್ನಾಗಿ ನೀಡಿದ ಗುರುವಿನ ಋಣವನ್ನೆಂದೂ ತೀರಿಸಲು ಸಾಧ್ಯವಿಲ್ಲ.
ಹಿಂದೆ ಒಬ್ಬ ಅನಾಥ ಬಾಲಕ ದಿಕ್ಕುದೆಸೆ ಇಲ್ಲದೆ ಪರಿತಪಿಸುತ್ತಾ ಜೀವನ ಸಾಗಿಸಲು ಅಸಮರ್ಥನಾಗಿ ತನ್ನ ಮಾವನ ಮನೆಯಲ್ಲಿ ಆ ಶ್ರಯ ಪಡೆದನು. ಮುಗ್ಧ ಮನವನ್ನರಿಯದ ಮಾವ ಅವನನ್ನು ದನಕರು ಕಾಯಲು ಮನೆಯಲ್ಲಿ ನೇಮಿಸಿದ. ಅಕ್ಷರಭ್ಯಾಸದಿಂದ ವಂಚಿತನಾದ ಆ ಹುಡುಗ ತನ್ನ ಓರಿಗೆ ಅವರನ್ನ ಎದುರಿಸಲಾಗದೆ ಮನನೊಂದು ತನ್ನನ್ನ ಲಘುವಾಗಿ ಕಾಣುವವರ ಅವಮಾನ ಸಹಿಸಲಾಗದೆ ಮನೋಸ್ಥೈರ್ಯ ಕುಂದಿ ದವನಾಗಿ ಅತ್ಯಂತ
ಅಧೈರ್ಯ ತಳೆದವನಾಗಿ ಸುಮ್ಮನೆ ಕೂತಿರುತ್ತಿದ್ದನು. ಒಂದು ದಿನ ಅಲ್ಲಿ ದನ ಕಾಯುತ್ತಿದ್ದಾಗ ಹಾಗೆಯೇ ನಿದ್ರೆಗೆ ಜಾರಿದನು. ಆಗ ಒಂದು ಹಾವು ಅವನ ಮೇಲೆ ಹರಿದಾಡಿ ಹೋಗಿದ್ದನ್ನ ಜನರು ನೋಡಿ ಅವನು ಮೃತನಾಗಿದ್ದಾನೆಂದು ಮಾವನಿಗೆ ತಿಳಿಸಿದರು. ಬಂದು ನೋಡಿದಾಗ ಆಶ್ಚರ್ಯಕರ ರೀತಿಯಿಂದ ಬಾಲಕ ಬದುಕುಳಿದಿದ್ದ. ಆಗ ಆ ಊರಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಬಂದಿದ್ದರು. ಅವರನ್ನು ನೋಡುವ ತವಕದಿಂದ ಬಾಲಕ ಜನರು ಸೇರುವ ಮೊದಲೇ ಅಲ್ಲಿಗೆ ಬಂದಿದ್ದ ನು. ಗುರುಗಳಿಗೆ ನಮಸ್ಕರಿಸಿ ತನ್ನ ದಯನೀಯ ಸ್ಥಿತಿ ಹೇಳಿಕೊಂಡನು. ಗುರುಗಳ ಮನಸ್ಸು ಮಮ್ಮಲ ಮರಗಿತು .ಆಗ ಅಭಯದ ಆಶೀರ್ವಾದ ನೀಡುತ್ತ ದನ ಕಾಯುವ ನೀನು ಮುಂದೆ ಜನ ಕಾಯುತ್ತೀಯ ಹೋಗು ಎನ್ನುತ್ತಾ ಅವಶ್ಯಕತೆ ಬಿದ್ದಾಗ ನನ್ನನ್ನು ಭಕ್ತಿಯಿಂದ ಸ್ಮರಿಸು ಎಂದು ಹೇಳಿದರು. ಆಗ ಎಲ್ಲರೂ ಸುಸಮಯಕ್ಕಾಗಿ ಹಂಬಲಿಸಿದರೆ ಬಾಲಕನು ಮಾತ್ರ ಆಪತ್ತಿನ ಸಮಯಕ್ಕಾಗಿ ಕಾದು ಕುಳಿತಿದ್ದನು. ಒಂದು ದಿನ ಅಸಾದುಲ್ಲಖಾನ ಎಂಬ ನವಾಬ ಆ ಊರಿಗೆ ಬಂದಿದ್ದನು ಆಗ ಅಲ್ಲಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಈ ತರುಣನು ಹೊರಟಿದ್ದನು. ಇವನನ್ನ ನೋಡಿ ಆಗ ತಾನೇ ಬಂದ ಲಕೋಟೆ ಕೊಟ್ಟು ಓದು ಎಂದು ನವಾಬ ಆ ಗ್ರಹಿಸಿದನು. ತರುಣ ಓದಲು ಬರುವುದಿಲ್ಲ ಎಂದಾಗ ಸಿಟ್ಟಿಗೆದ್ದು ಇವನನ್ನು ಆನೆಯ ಕಾಲಲ್ಲಿ ತುಳಿಸಿರಿ ಎಂದು ಆಜ್ಞೆ ಯನಿತ್ತನು. ಆಗ ಭಯಭೀತನಾಗಿ ಏಕಾಗ್ರ ಚಿತ್ತದಿಂದ ಸ್ವಾಮಿಗಳನ್ನು ತರುಣ ನೆನೆಯುತ್ತಿದ್ದನು. ತಕ್ಷಣ ವಿದ್ಯುತ್ ಪ್ರವಹಿಸಿದಂತ ಆಭಾಸವಾಗಿ ಜ್ಞಾನಿಗಳು ಓದುವ ರೀತಿ ಆ ಲಕೋಟೆಯನ್ನು ತೆಗೆದು
ಓದ ತೊಡಗಿದನು. ನವಾಬ ನಿಗೆ ಯುದ್ಧದಲ್ಲಿ ಗೆಲುವು ಆಗಿದ್ದು ಪತ್ರದಲ್ಲಿ ಉಲ್ಲೇಖವಾಗಿತ್ತು. ಆಗ ಇವನು ತನಗೆ ಅದೃಷ್ಟ ತಂದನೆಂದು ಅರಿತು ನವಾಬ ಅವನಿಗೆ ಉನ್ನತ ಸ್ಥಾನಕೊಟ್ಟು ಸನ್ಮಾನಿಸಿ ತನ್ನ ಬಳಿಯಲ್ಲಿರಿಸಿಕೊಂಡನು. ಹೀಗೆ ಅನಕ್ಷರಸ್ತನಿಗೆ ಅಕ್ಷರದ ವರವಾಗಿ ಜ್ಞಾನ ದೀವಿಗೆ ಹೊತ್ತಿಸಿ ಅನವರತ ಅಡಿಗಡಿಗೆ ಕಾಯುತ್ತ ಅಕ್ಷರ ರೇಖೆಯೊಂದಿಗೆ ಅಕ್ಷಯ ಸೌಖ್ಯದ ಆಶೀರ್ವಾದ ನೀಡಿದ ಗುರುವಿಗೆ ಅನಂತ ನಮನಗಳನ್ನ ಅರ್ಪಿಸುತ್ತಾ ಬಾಲಕ ಪ್ರೌಢಿಮೆಯಿಂದ ಮೆರೆದ ಈ ಪ್ರಸಂಗದಿಂದ ಅನೇಕ ನೀತಿಗಳ ಕಲಿಯಬಹುದು. ಗುರುವಿನ ಆಶೀರ್ವಾದದಿಂದ ಅಚ್ಚರಿಗಳ ಅಪೇಕ್ಷಿಸಬಹುದು. ಬದುಕು ಗುರುವಿಗೆ ಕೃತಜ್ಞನಾಗಿರಬೇಕು.
“ನ ಹೃಮ್ಮಯಾನಿ ತೀರ್ಥಾನಿ ನ ದೇವಾಮೃಚ್ಚಿಲಾಮಯಾ:
ತೆಪು ನoತ್ಯುರುಕಾಲೆನ ದರ್ಶನ ದೇವ ಸಾಧವ:”
ಎಷ್ಟೊಂದು ಅರ್ಥಗರ್ಭಿತವಾದ ಶ್ಲೋಕವಿದು ಅಲ್ಲವೇ? ಗುರುವಿನ ದರ್ಶನ ಮಾತ್ರದಿಂದ ಸಕಲ ದುರಿತಗಳು ನಿವಾರಣೆಯಾಗುತ್ತವೆ ಬನ್ನಿ ಮನದಿಂದ ಗುರುವಿನ ಚರಣಗಳಿಗೆ ವoದಿಸೋಣ..
ಜೈ ಹಿಂದ್
ಆರತಿ ಎನ್ ರಾವ್
