ಬೆಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರಿನ ಹಂಗಾಮಿ ಸಭಾಪತಿಯಾಗಿ ಡಾ. ಶ್ರೀನಿವಾಸ್ ಹ್ಯಾಟಿ ಅವರು ಆಯ್ಕೆಯಾಗಿದ್ದಾರೆ.

ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಮಾನವೀಯ ಸೇವೆ, ಸಮಾಜಮುಖಿ ಕಾರ್ಯಗಳು ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಡಾ. ಶ್ರೀನಿವಾಸ್ ಹ್ಯಾಟಿ ಅವರ ಅನುಭವ ಮತ್ತು ನಾಯಕತ್ವ ಮತ್ತಷ್ಟು ಬಲ ನೀಡಲಿದೆ ಎಂಬ ಆಶಯ ವ್ಯಕ್ತವಾಗಿದೆ.

“ನಿಮ್ಮ ಸೇವೆ, ಸಮರ್ಪಣೆ ಮತ್ತು ನಾಯಕತ್ವದಿಂದ ರೆಡ್ ಕ್ರಾಸ್ ಸೇವೆಗೆ ಹೊಸ ದಿಕ್ಕು ಸಿಗಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾನವೀಯ ಸೇವೆ ತಲುಪುವಂತಾಗಲಿ” ಎಂದು ಅಜಾತಶತ್ರು ಪತ್ರಿಕೆ ಬಳಗ ಶುಭ ಹಾರೈಸಿದೆ.

ಕರ್ನಾಟಕ ರಾಜ್ಯ ಶಾಖೆಯ ಹಂಗಾಮಿ ಸಭಾಪತಿಯಾಗಿ ಆಯ್ಕೆಯಾದ ಡಾ. ಶ್ರೀನಿವಾಸ್ ಹ್ಯಾಟಿ ಅವರಿಗೆ ಅಜಾತಶತ್ರು ಪತ್ರಿಕೆ ವತಿಯಿಂದ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳು.

Leave a Reply

Your email address will not be published. Required fields are marked *

Need Help?