ಕೊಪ್ಪಳ : ತಾಲೂಕು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸ್ಥಾನಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದನಕನದೊಡ್ಡಿಯ ಶಿಕ್ಷಕ ಜಗದೀಶ ಕುಂಬಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಕೊಪ್ಪಳದಲ್ಲಿ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಆಯ್ಕೆಯಾದ ಹಿನ್ನೆಲೆಯಲ್ಲಿ ದನಕನದೊಡ್ಡಿ ಶಾಲೆಯ ವತಿಯಿಂದ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.

ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಕೋರಿ, ಶಿಕ್ಷಣ ಪ್ರೇಮಿ ದೊಡ್ಡಬಸವರಾಜ್, ಮುಖ್ಯಗುರು ಅಶೋಕ್, ಶಿಕ್ಷಕರಾದ ಶಶಿಧರ್, ಸತ್ಯಪ್ಪ, ಮಲ್ಲಪ್ಪ ಮೇಟಿ, ಸುಂಕಪ್ಪ, ಶಿಕ್ಷಕಿಯರಾದ ಸುಮಾ, ಚನ್ನಮ್ಮ, ಪಕೀರಮ್ಮ, ಹುಸೇನಬಿ, ಈರಮ್ಮ, ಸುಜಾತಾ, ಪಾರ್ವತಿ, ಸಾವಿತ್ರಮ್ಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Need Help?